ಒಂದು ಬಾರಿ ಸ್ಮರಣೆ ಸಾಲದೆ ||ಪ.||
ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ ||ಅ.ಪ.||
ಹಿಂದನೇಕ ಜನ್ಮಗಳಲಿ ನೊಂದು ಯೋನಿಗಳಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ||೧||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದ ಭಕುತಿ ಬೇಕೆಂಬುವರಿಗೆ ||೨||
ಆರುಮಂದಿ ವೈರಿಗಳನು ಸೇರಲಿಸದಂತೆ ನೂಕಿ
ಧೀರನಾಗಿ ಹರಿಯ ಪಾದವ ಸೇರಬೇಕೆ೦ಬುವರಿಗೆ ||೩||
ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ ||೪||
ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು
ತಾನು ಬದುಕಲಾರದಿರಲು ತೋರಿ ಕೊಟ್ಟ ಮಧ್ವಮುನಿಯ ||೫||
OMdu bAri smaraNe
Поcмотреть все песни артиста
Other albums by the artist