ಸೋಮಾರ ಸಂತೆಗೆ ಚುಂಚಾನ ಕಟ್ಟೆಗೆ
ಬಂದಿದ್ದ ಸಂಪಿಗೆ ಜಿಂಗ ಚಿಕ್ಕ ಚಕ್ಕ ಜಿಂಗ
ಕನಕಾಂಬರ ಹೂವಿಗೆ ಚೌಕಾಸಿ ಮಾಡುತ
ನಿಂತಿದ್ದ ಮಲ್ಲಿಗೆ ಜಿಂಗ ಚಿಕ್ಕ ಚಕ್ಕ ಜಿಂಗ
ನಾಗ ಸ್ವರಕೆ ಡೊಳ್ಳುಡಕ್ಕೆ ಸದ್ದಿಗೆ
ನಾಗ ಜಡೆಯ ಕುಣಿ ಕುಣಿಸಿ
ನಾಗ ಸ್ವರಕೆ ಡೊಳ್ಳುಡಕ್ಕೆ ಸದ್ದಿಗೆ
ನಾಗ ಜಡೆಯ ಕುಣಿ ಕುಣಿಸಿ
ಮೆಲ್ಲಾ ಮೆಲ್ಲನೆ ಬಂದ್ಲು ನನ್ನ ಮನಸಿಗೆ
ಸಂಕ್ರಾಂತಿ ಹಬ್ಬದಿ ಸೊಕ್ಕಿದ್ದ ಹೋರಿಯ
ಗುದ್ದಾಡಿ ಗೆದ್ದವ ಜಿಂಗ ಚಿಕ್ಕ ಚಿಕ್ಕ ಜಿಂಗ
ತಂಬಾಕು ಮೀಸೆಯ ಬೆಳ್ನಾಗೆ ನೀವುತ
ನಿಂತಿದ್ದ ಭೈರವ ಜಿಂಗ ಚಿಕ್ಕ ಚಿಕ್ಕ ಜಿಂಗ
ಕೋಟೆ ಗರಡಿ ಪೈಲುವಾನು ಜಟ್ಟಿಗೆ
ಜೇಡಿ ಮಣ್ಣ ಮೂತಿಗುಣಿಸಿ
ಕೋಟೆ ಗರಡಿ ಪೈಲುವಾನು ಜಟ್ಟಿಗೆ
ಜೇಡಿ ಮಣ್ಣ ಮೂತಿಗುಣಿಸಿ
ಗೆಲುವಿನ ನಗೆ ಬೀಸಿ ನನ್ನ ಸೆಳೆದವ
ಸೋಮಾರ ಸಂತೆಗೆ ಚುಂಚಾನ ಕಟ್ಟೆಗೆ
ಬಂದಿದ್ದ ಸಂಪಿಗೆ ಜಿಂಗ ಚಿಕ್ಕ ಚಕ್ಕ ಜಿಂಗ
ಸಂಕ್ರಾಂತಿ ಹಬ್ಬದಿ ಸೊಕ್ಕಿದ್ದ ಹೋರಿಯ
ಗುದ್ದಾಡಿ ಗೆದ್ದವ ಜಿಂಗ ಚಿಕ್ಕ ಚಿಕ್ಕ ಜಿಂಗ
♪
ನಗುವಿನ ಸಿರಿಯಲಿ ಎಳೆ ಎಳೆ ಎಲೆಯಾ ವೀಳ್ಯ ತಿನಿಸಿದಳು
ಮಿನುಗುವ ಕಣ್ಣಲಿ ಒಲವಿನ ಬೆಳಕ ಧಾರೆ ಸುರಿಸಿದನು
ಚಕ್ಕೋರಿ ಧನಿಯಲಿ ಕಿಲ ಕಿಲ ನಕ್ಕಳು
ಕಸ್ತೂರಿ ಪರಿಮಳ ಕನಸಿಗೆ ತಂದನು
ಇಳಿದೆನು ಪ್ರೇಮ ಕಡಲಿನೊಳು
ಮರೆತೆನು ನಾನು ಹಗಲಿರುಳು
ವರಿಸುತ ಆದೆ ಇವನೊಡತಿ
ತುಳಿದೆನು ನಾನು ಹೊಸ ಹೊಸಿಲು
ಸೋಮಾರ ಸಂತೆಗೆ ಚುಂಚಾನ ಕಟ್ಟೆಗೆ
ಬಂದಿದ್ದ ಸಂಪಿಗೆ ಜಿಂಗ ಚಿಕ್ಕ ಚಕ್ಕ ಜಿಂಗ
ತಂಬಾಕು ಮೀಸೆಯ ಬೆಳ್ನಾಗೆ ನೀವುತ
ನಿಂತಿದ್ದ ಭೈರವ ಜಿಂಗ ಚಿಕ್ಕ ಚಿಕ್ಕ ಜಿಂಗ
♪
ಮೊದಲನೇ ಇರುಳಲಿ ಕಸಿವಿಸಿಯಲಿ ಬಿಸಿ ಹಾಲು ಮರೆತವನು
ಹಸಿವೆಯ ಮರೆಯಿಸೋ ಸಿಹಿ ಸಿಹಿ ಜೇನಿನ ಮುತ್ತು ಸುರಿದವಳು
ಸಿಂಗಾರದರಮನೆ ಇವನೆದೆಯೊಳಗೆ
ಬಂಗಾರದರಗಿಣಿ ನನ್ನ ತೊಳ ಸೆರೆಗೆ
ಕನಸಿನ ತುಂಬಾ ಕಥೆ ಬರೆದ
ನೆನಪಿನ ತುಂಬಾ ಸಿಹಿ ಸುರಿದ
ಮರೆಯದ ಪ್ರೇಮ ಪುಟ ಇವಳು
ಎದೆಯಲಿ ಗಾಳಿಪಟ ಇವಳು
ಸಂಕ್ರಾಂತಿ ಹಬ್ಬದಿ ಸೊಕ್ಕಿದ್ದ ಹೋರಿಯ
ಗುದ್ದಾಡಿ ಗೆದ್ದವ ಜಿಂಗ ಚಿಕ್ಕ ಚಿಕ್ಕ ಜಿಂಗ
ತಂಬಾಕು ಮೀಸೆಯ ಬೆಳ್ನಾಗೆ ನೀವುತ
ನಿಂತಿದ್ದ ಭೈರವ ಜಿಂಗ ಚಿಕ್ಕ ಚಿಕ್ಕ ಜಿಂಗ
ಕೋಟೆ ಗರಡಿ ಪೈಲುವಾನು ಜಟ್ಟಿಗೆ
ಜೇಡಿ ಮಣ್ಣ ಮೂತಿಗುಣಿಸಿ
ಕೋಟೆ ಗರಡಿ ಪೈಲುವಾನು ಜಟ್ಟಿಗೆ
ಜೇಡಿ ಮಣ್ಣ ಮೂತಿಗುಣಿಸಿ
ಗೆಲುವಿನ ನಗೆ ಬೀಸಿ ನನ್ನ ಸೆಳೆದವ
ಸೋಮಾರ ಸಂತೆಗೆ ಚುಂಚಾನ ಕಟ್ಟೆಗೆ
ಬಂದಿದ್ದ ಸಂಪಿಗೆ ಜಿಂಗ ಚಿಕ್ಕ ಚಕ್ಕ ಜಿಂಗ
ಕನಕಾಂಬರ ಹೂವಿಗೆ ಚೌಕಾಸಿ ಮಾಡುತ
ನಿಂತಿದ್ದ ಮಲ್ಲಿಗೆ ಜಿಂಗ ಚಿಕ್ಕ ಚಕ್ಕ ಜಿಂಗ
ನಾಗ ಸ್ವರಕೆ ಡೊಳ್ಳುಡಕ್ಕೆ ಸದ್ದಿಗೆ
ನಾಗ ಜಡೆಯ ಕುಣಿ ಕುಣಿಸಿ
ನಾಗ ಸ್ವರಕೆ ಡೊಳ್ಳುಡಕ್ಕೆ ಸದ್ದಿಗೆ
ನಾಗ ಜಡೆಯ ಕುಣಿ ಕುಣಿಸಿ
ಮೆಲ್ಲಾ ಮೆಲ್ಲನೆ ಬಂದ್ಲು ನನ್ನ ಮನಸಿಗೆ
Поcмотреть все песни артиста
Other albums by the artist