ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ ಬಾಳಿಗೆ ಒಂದೆ ಮನೆ ಬಾಳೆಗೆ ಒಂದೆ ಗೊನೆ ಭೂಮಿಗೆ ದೈವ ಒಂದೇನೆ ತಾಯಿ ದಾರಿಗೆ ಒಂದೆ ಕೊನೆ ರಾಗಿಗೆ ಒಂದೆ ತೆನೆ ಸೃಷ್ಟಿಸೋ ಜೀವೆ ಒಂದೇನೇ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯಾ ದಡವಿರದ ಕರುಣೆ ಕಡಲಿವಳು ಗುಡಿಯಿರದ ದೇವಿ ಇವಳಯ್ಯ ಮನಸು ಮಗು ತರ ಪ್ರೀತಿಯಲಿ ಹರಸೊ ಹಸು ತರ ತ್ಯಾಗದಲಿ ಜಗ ತೂಗೊ ಜನನಿ ಜೀವದ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ ಪದಗಳಿಗೆ ಸಿಗದ ಗುಣದವಳು ಬರೆಯುವುದು ಹೇಗೆ ಇತಿಹಾಸ ಬದುಕುವುದ ಕಲಿಸೊ ಗುರು ಇವಳು ನರಳುವಳೋ ಹೇಗೊ ನವಮಾಸ ಗಂಗೆ ತುಂಗೆಗಿಂತ ಪಾವನಳು ಬೀಸೊ ಗಾಳ ಗಿಂಥ ತಂಪಿವಳು ಜಗ ತೂಗೊ ಜನನಿ ಜೀವದ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ