Kishore Kumar Hits

Raju Ananthaswamy - Kalisu Guruve lyrics

Artist: Raju Ananthaswamy

album: Kalisu Guruve


ಕಲಿಸು ಗುರುವೇ ಕಲಿಸು, ಕಲಿಸು ಸದ್ಗುರುವೇ ನೀ ಕಲಿಸು
ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು |
ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು
ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು ||ಕಲಿಸು||
ಬೆವರಿಳಿಸಿ ಗಳಿಸಿದ ಒಂದು ಕಾಸು
ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು ||2||
ಸೋಲು ಗೆಲುವಿನಲಿ ಸಮಚಿತ್ತದಿಂದಿರಲು
ಶತ್ರುಗಳಿಗೂ ಸನ್ಮಿತ್ರನಾಗಿರಲು ಕಲಿಸು ||2||
ಹಸಿರು ಮಲೆ ಹೂವಿನಲಿ ನಾ ಧ್ಯಾನಿಸುವುದ ಕಲಿಸು
ಜಾಣನಾಗಲು ಕಲಿಸು ||ಕಲಿಸು||
ಜಗವೆಲ್ಲಾ ಒಂದಾಗಿ ಜರಿದರೂ ಸರಿಯೇ
ನನ್ನನ್ನೇ ನಾ ನಂಬುವ ಬಗೆ ನೀ ಕಲಿಸು ||2||
ಅಳುವಿನಲಿ ಅವಮಾನ ಇಲ್ಲೆಂಬುದ ಕಲಿಸು
ನನ್ನನ್ನೇ ನಾ ನೋಡಿ ನಗುವುದನು ಕಲಿಸು ||2||
ಮಾನವೀಯತೆಯಲಿ ನಾ ಮರುಗುವುದನು ಕಲಿಸು
ಮಾನವೀಯತೆಯಲಿ ನಾ ಕರಗುವುದನು ಕಲಿಸು
ಜಾಣನಾಗಲು ಕಲಿಸು ||ಕಲಿಸು||

Поcмотреть все песни артиста

Other albums by the artist

Similar artists