ಅಸಿಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ
ವಸುಂಧರೆಯ ಹೂಮಯ್ಯಲ್ಲಿ ಹೊನ್ನಾರು ಹೂಡಿದೆ
(ಅಸಿಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ)
(ವಸುಂಧರೆಯ ಹೂಮಯ್ಯಲ್ಲಿ ಹೊನ್ನಾರು ಹೂಡಿದೆ)
ಮಸೆವ ಬಿಸಿಲು ಮಾಗಿರುವಲ್ಲಿ ಮಂದಹಾಸ ಕೂಡಿದೆ
ಹಸಿದ ರೈತ ಸಂಕುಲದಲ್ಲಿ ಹೊಸ ಆಸೆ ಹಾಡಿದೆ
(ಅಸಿಮರೂಪಿ ಅಂಬರದಲ್ಲಿ)
ಅಗಮ್ಯ ನೆಲೆಯ ಕಾನನದಲ್ಲಿ
ಹರಿದ್ವರ್ಣ ತೂಗಿದೆ
ಅದಮ್ಯ ಸಿರಿಯ ಸಂಭ್ರಮದಲ್ಲಿ
ಜೀರುಂಡೆ ಕೂಗಿದೆ
(ಜೀರುಂಡೆ ಕೂಗಿದೆ)
(ಜೀರುಂಡೆ ಕೂಗಿದೆ)
ವರುಣ ಬರುವ ಆವೇಶದಲ್ಲಿ
ದುಂದುಭಿ ಮೊಳಗಿದೆ
ಹರ್ಷ ತರುವ ಮಾರುತನಲ್ಲಿ
ಮಣ್ಣಿನ ಕಂಪಿದೆ
ಅಸಿಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ
ವಸುಂಧರೆಯ ಹೂಮಯ್ಯಲ್ಲಿ ಹೊನ್ನಾರು ಹೂಡಿದೆ
(ಅಸಿಮರೂಪಿ ಅಂಬರದಲ್ಲಿ)
ಅನನ್ಯ ಬಗೆಯ ಬಾಂದಳದಲ್ಲೂ
ಸಂತೋಷ ಹೊಮ್ಮಿದೆ
ಅನಿತ್ಯ ಬದುಕ ಗೊಂದಲದಲ್ಲೂ
ಉನ್ಮಾದ ಚಿಮ್ಮಿದೆ
(ಉನ್ಮಾದ ಚಿಮ್ಮಿದೆ)
(ಉನ್ಮಾದ ಚಿಮ್ಮಿದೆ)
ಅಸಂಖ್ಯ ಹೊದರ ತರುಲತೆಯಲ್ಲೂ
ಲಾವಣ್ಯ ಮಿಂಚಿದೆ
ಅನೂಹ್ಯ ಪದರ ಕಾರ್ಮುಗಿಲಲ್ಲೂ
ಹೂಮಳೆಯ ಸಂಚಿದೆ
ಅಸಿಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ
ವಸುಂಧರೆಯ ಹೂಮಯ್ಯಲ್ಲಿ ಹೊನ್ನಾರು ಹೂಡಿದೆ
(ಅಸಿಮರೂಪಿ ಅಂಬರದಲ್ಲಿ)
ಮಹಾಪೂರ ನಿರೀಕ್ಷೆಯಲ್ಲೂ
ಕಾತರವೆ ಕಾದಿದೆ
ಗರಿಕೆ ಚಿಗುರ ಅಂಕರದಲ್ಲೂ
ಆನಂದ ತುಂಬಿದೆ
(ಆನಂದ ತುಂಬಿದೆ)
(ಆನಂದ ತುಂಬಿದೆ)
ಹೊಸ ನೇಗಿಲ ಮುನ್ನಡೆಯಲ್ಲೂ
ಋತುಮಾನದ ರಂಗಿದೆ
ನವಮಾನವ ಮುನ್ನೋಟದಲ್ಲೂ
ಕಾಲಚಕ್ರ ಉರುಳಿದೆ
ಅಸಿಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ
ವಸುಂಧರೆಯ ಹೂಮಯ್ಯಲ್ಲಿ ಹೊನ್ನಾರು ಹೂಡಿದೆ
(ಅಸಿಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ)
(ವಸುಂಧರೆಯ ಹೂಮಯ್ಯಲ್ಲಿ ಹೊನ್ನಾರು ಹೂಡಿದೆ)
ಮಸೆವ ಬಿಸಿಲು ಮಾಗಿರುವಲ್ಲಿ ಮಂದಹಾಸ ಕೂಡಿದೆ
ಹಸಿದ ರೈತ ಸಂಕುಲದಲ್ಲಿ ಹೊಸ ಆಸೆ ಹಾಡಿದೆ
(ಅಸಿಮರೂಪಿ ಅಂಬರದಲ್ಲಿ)
Поcмотреть все песни артиста
Other albums by the artist