ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ಆನಂದಮಯ ಈ ಜಗ ಹೃದಯ ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ ಆನಂದಮಯ ಈ ಜಗ ಹೃದಯ ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ ಆನಂದಮಯ ಈ ಜಗ ಹೃದಯ ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ಆನಂದಮಯ ಈ ಜಗ ಹೃದಯ