Kishore Kumar Hits

Bharath B J - Aleyaagi Baa lyrics

Artist: Bharath B J

album: Aleyaagi Baa


ಮನದೊಳಗಿನ ಮಿಡಿತ ಕನಸಲ್ಲಿ ಕಾಡೋ ಕಣ್ಗಳಿಗೆ
ನೆನಪುಗಳದೆ ಮೊರೆತ, ಅಲೆಯಾಗಿ ಬಾ ಬಳಿಗೆ
ಹೊರಟಿರುವೆ ನಾನು ನನ್ನುಳಿದ ಹೃದಯವ ಹುಡುಕುತಲಿ
ಸಹಕರಿಸು ನೀನು ಸೆರೆಯಾಗಿ ತೋಳಲ್ಲಿ
ನೀ ನೀಡಿರೋ ಸಜೆಗೆ ಸೆರೆವಾಸ ಮುಗಿಸಾಗಿದೆ
ಅನುರಾಗದ ಅಲೆಗೆ ಆ ಬಾಲ್ಯ ಬೆರೆತಾಗಿದೆ
ಶುರು ಮಾಡಿದ ಮರಳ ಗೂಡು ಈಗ ನೀನೇ ಪೂರ್ತಿ ಮಾಡು
ಸನಿಹ ಬಾರೆ ನೀ ಮಾಯಾಜಿಂಕೆ
ಮನದೊಳಗಿನ ಮಿಡಿತ ಕನಸಲ್ಲಿ ಕಾಡೋ ಕಣ್ಗಳಿಗೆ
ನೆನಪುಗಳದೆ ಮೊರೆತ, ಅಲೆಯಾಗಿ ಬಾ ಬಳಿಗೆ

ನೀ ಬರೆದ ಆಸೆಗಳ ತೀರಿಸುವ ಬಯಕೆ
ಅಗೆದಷ್ಟು ಬೊಗಸೆ ನೆನಪು, ಆ ನೆನಪೇ ಹುರುಪು
ಎಲ್ಲ ಅರ್ಧ ಬರೆದ ಕಾದಂಬರಿ
ಪೂರ್ತಿ ಮಾಡುವ ಕನಕಾಂಬರಿ
ಮನದೊಳಗಿನ ಮಿಡಿತ ಕನಸಲ್ಲಿ ಕಾಡೋ ಕಣ್ಗಳಿಗೆ
ನೆನಪುಗಳದೆ ಮೊರೆತ, ಅಲೆಯಾಗಿ ಬಾ ಬಳಿಗೆ

ಕಿಸೆಯೊಳಗೆ ನೀ ನಗುವ ಭಾವಚಿತ್ರ ಒಂದಿದೆ
ಜೊತೆ ನಿಂತು ಏಳು ಹೆಜ್ಜೆ ಇಡೋ ಬಯಕೆ ಬಂದಿದೆ
ಕಾಲ ಸರಿದೂಗಿಸಿ ಕೂಡಿ ಬಂದಿದೆ
ಸೇರು, ನನ್ನ ಒಲವೇ, ಜೀವ ಮಿಡಿದಿದೆ
ಚಡಪಡಿಸಿದೆ ಮನವು ಮರೆಯಾದ ಆ ಕಣ್ಗಳಿಗೆ
ನೆನಪುಗಳದೆ ಮೊರೆತ, ಅಲೆಯಲ್ಲಿ ಕಳೆದುಹೋದೆ

Поcмотреть все песни артиста

Other albums by the artist

Similar artists