ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ ನಾ ನಿಂತ ನೆಲವನು ಕಾಲ ಬೆರಳು ತಪ್ಪಿದೆ ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ ಜೋಕಾಲಿ ♪ ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳೋ ಪ್ರತಿಯೊಬ್ಬರಲೂ ಕಾಡುವಳು ಅವಳು ಬೆಂಬಿಡದಂಥ ಆ ನಗುವಿನ ನೆರಳು ನಗುತ ಕೊಲುವ ಒಲವೋ ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ ಹೂ ಕನಸ ಜೋಕಾಲಿ ♪ ಮೊದಲ ನೋಟ, ಮೊದಲ ಮಾತು, ಮೊದಲ ಸ್ಪರ್ಶ, ಮೊದಲ ಆಹಾ ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ ಈ ಮೊಗ್ಗನ್ನ ಹೂವಾಗಿಸು ಬಾರೋ ನಾನಾಗುವೆನು ನಿನ್ನ ಹೂವಿನ ತೇರು ಹೆಣ್ಣಾ ಮನವಾ ತಿಳಿಯೋ ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ ಈ ನಗುವ ಮುಖದಲ್ಲಿ ಬರಿ ನೋವಿದೆಯೋ ಉಸಿರಾಡೋ ಶವಕೆಲ್ಲಿ ಸಾವಿದೆಯೋ ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ ಅಲೆಮಾರಿ