(ಹೇ, ಸೋನಾ Peace of mind in my loveನಾ) ♪ ಯಾತಕೆ ನಿನ್ನನೇ ಬಯಸಿದೆ ಹೃದಯ ನಿನ್ನಲಿ ಏನಿದೆ ಓ ಮಹರಾಯ ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ನಾ ಕಾಡಿಸುವೆ ನಿನ್ನನೇ ♪ ಇತ್ತೀಚಿಗೆ ಗೊತ್ತಾಗದೆ ನಿಂತು ಬಿಡುವೆ ರಸ್ತೆಯಲಿ ಕನ್ನಡಿ ಮುಂದೆ ಕಣ್ಣು ಹೊಡೆವೆ ಬಿದ್ದು ಬಿಟ್ನಾ ಪ್ರೀತಿಯಲ್ಲಿ ಕಣ್ಗಳ ಮಿಂಚು ಹೆಚ್ಚಿಸಿದವನೇ ಕಲ್ಪನೆಯಲ್ಲಿ ಮುದ್ದಿಸಿದವನೇ ಮಾಮೂಲಿ ಅಲ್ಲ ನೀನು ತುಸು ನಾಚಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ನಾ ಕಾಯುವೆನು ನಿನ್ನನೇ ♪ ಸನಿಹವು ಸಲಿಗೆ ಕಲಿಸುತಿರಲು ಹರೆಯದ ಹಣತೆ ಬೆಳಗುತಿರಲು ಹರುಷವು ಕುಣಿತವನು ಕಲಿಸಿದೆ ನಲುಮೆಗೆ ಅಮಲು ಸೇರಿಸಿದವನೇ ಬೆರಳಿಗೆ ಬೆರಳು ಸೋಕಿಸಿದವನೇ ನನ್ನನ್ನು ತಬ್ಬು ನೀನು ಕಿವಿ ಕಚ್ಚಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ಒಬ್ಬನೇ, ಒಬ್ಬನೇ ನಾ ಮೋಹಿಸುವೆ ನಿನ್ನನೇ