ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ, ಕನ್ನಡ ಸವಿ ನುಡಿಯೋ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ, ಕನ್ನಡ ಸವಿ ನುಡಿಯೋ ವಾಣಿಯ ವೀಣೆಯ ಸ್ವರಮಾಧುರ್ಯವೋ ಸುಮಧುರ ಸುಂದರ ನುಡಿಯೋ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ, ಕನ್ನಡ ಸವಿ ನುಡಿಯೋ ♪ ಕವಿ ನುಡಿ ಕೋಗಿಲೆ ಹಾಡಿದ ಹಾಗೆ ದಪದ ರಿಸರಿ ಗಾಪಪ ದಸರಿ ದಸ ಸವಿ ನುಡಿ ತಣ್ಣನೆ ಗಾಳಿಯ ಹಾಗೆ ♪ ಕವಿ ನುಡಿ ಕೋಗಿಲೆ ಹಾಡಿದ ಹಾಗೆ ಸವಿ ನುಡಿ ತಣ್ಣನೆ ಗಾಳಿಯ ಹಾಗೆ ಒಲವಿನ ಮಾತುಗಳಾಡುತಲಿರಲು ಮಲ್ಲಿಗೆ ಹೂಗಳು ಅರಳಿದ ಹಾಗೆ ಮಕ್ಕಳು ನುಡಿದರೆ ಸಕ್ಕರೆಯಂತೆ ಅಕ್ಕರೆ ನುಡಿಗಳು ಮುತ್ತುಗಳಂತೆ ಪ್ರೀತಿಯ, ನೀತಿಯ ಮಾತುಗಳೆಲ್ಲ ಸುಮಧುರ ಸುಂದರ ನುಡಿಯೋ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ, ಕನ್ನಡ ಸವಿ ನುಡಿಯೋ ♪ ಕುಮಾರವ್ಯಾಸನ ಕಾವ್ಯದ ಚಂದ ♪ ಕವಿ ಸರ್ವಜ್ಞನ ಪದಗಳ ಅಂದ ♪ ಕುಮಾರವ್ಯಾಸನ ಕಾವ್ಯದ ಚಂದ ಕವಿ ಸರ್ವಜ್ಞನ ಪದಗಳ ಅಂದ ದಾಸರು, ಶರಣರು ನಾಡಿಗೆ ನೀಡಿದ ಭಕ್ತಿಯ ಗೀತೆಗಳ ಪರಮಾನಂದ ರನ್ನನು ರಚಿಸಿದ ಹೊನ್ನಿನ ನುಡಿಯು ಪಂಪನು ಹಾಡಿದ ಚಿನ್ನದ ನುಡಿಯು ಕನ್ನಡ ತಾಯಿಯು ನೀಡಿದ ವರವು ಸುಮಧುರ ಸುಂದರ ನುಡಿಯೋ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ, ಕನ್ನಡ ಸವಿ ನುಡಿಯೋ ವಾಣಿಯ ವೀಣೆಯ ಸ್ವರಮಾಧುರ್ಯವೋ ಸುಮಧುರ ಸುಂದರ ನುಡಿಯೋ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ, ಕನ್ನಡ ಸವಿ ನುಡಿಯೋ ಸುಧೆಯೋ, ಕನ್ನಡ ಸವಿ ನುಡಿಯೋ