ನಿನದೇನೆ ನಿನದೇನೆ ಜನುಮ ನಿನ್ನೊಲವೆ ಹೃದಯಂಗಮ ನಿನದೇನೆ ನಿನದೇನೆ ಪ್ರೇಮ ನಿನ್ನೊಲವೆ ಹೃದಯಂಗಮ ನೀನಿರದೆ ನಾನಿರೆನು ಒ, ಒಲವೇ ನಿನ ನೆನಪೇ ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲೂ, ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು ನಿನ್ನಿಂದಲೇ ಸದಾ, ಬದುಕುವೆನು ನಾ ದಿನ ನಿನ್ನಿಂದಲೇ ಸದಾ, ಬೆಳಗುವುದು ಈ ಮನ ನೀ ಜೀವನ ♪ ಕನಸಾದೆ ನೀನು, ನನಸಾದೆ ನೀನು ಮನಸಾರೆ ನನ ಬಾಳಿಗೆ ನಗುವಾದೆ ನೀನು, ಜಗವಾದೆ ನೀನು ನೀ ಹೋದೆ ಯಾವ ಕಡೆಗೆ ಹೇಗಿರಲಿ ನಿನ್ನ ಹೊರತು ನೀನೆ ನನ್ನ ಗುರುತು ಅಲೆದಾಟ ನನಗಿನ್ನೂ ಬಿಡದ ನೆನಪು ಸುಡುತ ಇರಲು ನನ್ನನ್ನು ಎಂದಿಗೂ ಒಗಟಾಗಿದೆ ಈ ಜೀವನ ನಿನದೇನೆ ನಿನದೇನೆ ಜನುಮ ನಿನ್ನೊಲವೆ ಹೃದಯಂಗಮ ನಿನದೇನೆ ನಿನದೇನೆ ಪ್ರೇಮ ನಿನ್ನೊಲವೆ ಹೃದಯಂಗಮ ನೀನಿರದೆ ನಾನಿರೆನು ಒ, ಒಲವೇ ನಿನ ನೆನಪೇ ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲೂ, ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು ನಿನ್ನಿಂದಲೇ ಸದಾ, ಬದುಕುವೆನು ನಾ ದಿನ ನಿನ್ನಿಂದಲೇ ಸದಾ, ಬೆಳಗುವುದು ಈ ಮನ ನೀ ಜೀವನ