Arjun Janya - Marethuhoyithe lyrics
Artist:
Arjun Janya
album: Marethuhoyithe
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ.
ಕರಗಿದೆ ನಾಲಿಗೆ ಬರವಿದೆ ಮಾತಿಗೆ.
ಮೆರವಣಿಗೆ ಹೊರಟಂತೆ ನಾ ಸಾವಿಗೆ.
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ.
ಒಂದು ನಿಶ್ಶಬ್ದ ರಾತ್ರೀಲಿ ನಾವು ಆಡಿದಾ ಮಾತು ಹಸಿಯಾಗಿದೆ.
ನಾವು ನಡೆದಂತ ಹಾದೀಲಿ ಇನ್ನೂ
ಹೆಜ್ಜೆಗುರುತೆಲ್ಲ ಹಾಗೆ ಇದೆ.
ಒಂಚೂರು ಹಿಂತಿರುಗಿ ನೀ ನೋಡೆಯ.
ಇನ್ನೊಮ್ಮೆ ಕೈಚಾಚೆಯ.
ಕರಗಿದೆ ನಾಲಿಗೆ. ಬರವಿದೆ ಮಾತಿಗೆ.
ಮೆರವಣಿಗೆ ಹೊರಟಂತೆ ನಾ ಸಾವಿಗೆ.
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ.
ಜೋರು ಮಳೆಯೆಲ್ಲ ನಂಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ.
ಕೋಟಿ ಕನಸೆಲ್ಲ ಕೈಜಾರಿ ಹೋಗಿ
ಕಾಲಿ ಕೈಯಲ್ಲಿ ಕುಳಿತಂತಿದೆ.
ಎಷ್ಟೊಂದು ಏಕಾಂಗಿ ನೋಡೀದಿನ
ದೂರಾಗಿ ನಿನ್ನಿಂದ ನಾ.
ಕರಗಿದೆ ನಾಲಿಗೆ ಬರವಿದೆ ಮಾತಿಗೆ.
ಮೆರವಣಿಗೆ ಹೊರಟಂತೆ ನಾ ಸಾವಿಗೆ.
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ.
Поcмотреть все песни артиста
Other albums by the artist