ನೀನು ಬಗೆಹರಿಯದ ಹಾಡು ನೋಡು ಹದಿಹರೆಯದ ಪಾಡು ಈ ವಿಷಯದಿ ನನಗೆ ಅನುಭವವು ಕಮ್ಮಿ ಎಷ್ಟೆಂದರೂ ನಾನು ಉದಯೋನ್ಮುಖ ಪ್ರೇಮಿ ಇದು ಖಾಸಗಿ ಕಾರ್ಯಕ್ರಮ ಇನ್ನೇನಿಲ್ಲ ♪ ನೀನು ಬಗೆಹರಿಯದ ಹಾಡು ನೋಡು ಹದಿಹರೆಯದ ಪಾಡು ♪ ನನಗಷ್ಟೇ ನೀನು ಕೊಡುವಾಗ ಪಾಠ ಹೃದಯಾನೇ ನನ್ನ ಗುರುದಕ್ಷಿಣೆ ತುಟಿ ಕಚ್ಚಿ ಆಹಾ! ಬರೆವಾಗ ನೀನು ನನಗಂತೂ ಬೇಕು ಹಿತರಕ್ಷಣೆ ಕನಸಂತೂ ಈಗ ಚಿರಪರಿಚಿತ ಊರು ಹುಚ್ಚಾದರೆ ಪೂರ್ತಿ ಹೊಣೆಗಾರರು ಯಾರು ದಯಪಾಲಿಸು ಕಿರು ಕಾಳಜಿ ಇನ್ನೇನಿಲ್ಲ ♪ ನೀನು ಬಗೆಹರಿಯದ ಹಾಡು ♪ ಏಕಾಂಗಿಯಾದ ನಿನ ಕೋಣೆಯಲ್ಲಿ ನಾನಾಗಬೇಕು ನಿಲುಗನ್ನಡಿ ಅಥವಾ ನೀ ಬಂದು ರುಚಿ ನೋಡಿ ನೋಡಿ ಚೌಕಾಶಿ ಮಾಡೋ ಸಿಹಿ ಅಂಗಡಿ ಜೊತೆ ಸೇರಿಸಿ ಹೆಸರಾ ಬರೆದಳಿಸುವ ಗೀಳು ಮುಖ ಮರೆಸುವ ಹೆರಳ ಬದಿ ಸರಿಸಲೇ ಹೇಳು? ಪಠ್ಯೇತರ ಚಟುವಟಿಕೆಯು ಇನ್ನೇನಿಲ್ಲ ♪ ನೀನು ಬಗೆಹರಿಯದ ಹಾಡು ನೋಡು ಹದಿಹರೆಯದ ಪಾಡು