Kishore Kumar Hits

Hamsa Lekha - Yaaru Bhumige (From "Sambhrama") lyrics

Artist: Hamsa Lekha

album: Nadha Brahma Hamsalekha Classic Hit Songs


ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆತಂದರೋ
ಹೆಣ್ಣು ಮೊದಲಾ?
ಗಂಡು ಮೊದಲಾ?
ಆಸೆ ಮೊದಲಾ?
ಅಂದ ಮೊದಲಾ?
ಅಂದ ಅಂದರೇನು, ನೀನೆ ಅಂದೆ ನಾನು

ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ, ಬಾರೇ

ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು

ಮನಸು ಹೇಳಲಿಲ್ಲ, ಕನಸು ತೋರಲಿಲ್ಲ, ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ
ನಿನ್ನ ನಲ್ಲೆ
ನೋಡಿದಲ್ಲೇ
ನೋಟದಲ್ಲೇ
ನನ್ನ ಎದೆಯಲ್ಲೇ ಸೇರಿ ಹೋದೆ ಬಾ
ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರು
ಕಣ್ಣು ಮೊದಲಾ?
ಹೃದಯ ಮೊದಲಾ?
ಆಸೆ ಮೊದಲಾ?
ಅಂದ ಮೊದಲಾ?
ಅಂದ ಅಂದರೇನು ನೀನೆ ಅಂದೇ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ, ಬಾರೇ

ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ

ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಎಂದೇ
ಕೂಗಿ ಎಂದೇ
ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ
ಯಾರು ಹೆಣ್ಣಿಗೆ ಮೊದಲ ಬಾರಿಗೆ ನಾಚುವ ವರ ತಂದರೋ
ಕಣ್ಣು ಮೊದಲಾ?
ರೆಪ್ಪೆ ಮೊದಲಾ?
ಆಸೆ ಮೊದಲಾ?
ಅಂದ ಮೊದಲಾ?
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ, ಬಾರೇ, ಬಾರೇ, ಬಾರೇ

Поcмотреть все песни артиста

Other albums by the artist

Similar artists