Kishore Kumar Hits

Joshua Sridhar - AWASARA lyrics

Artist: Joshua Sridhar

album: YAANA (Original Motion Picture Soundtrack)


ಅವಸರ ಇಗೋ ನನಗೆ ಸಡಗರ ಎದೆಯೊಳಗೆ
ಅರಿಯದೇ ಅರಿಳಿದ ಪ್ರೀತಿಗೆ ಹೃದಯ ಮಿಡಿಯುವ ಘಳಿಗೆ
ಕಳ್ಳನಿವನು ಮುಗುಳುನಗೆ ಮಲ್ಲನು ಇವನು
ಬದುಕಿನಲಿ ಬಂದವನು
ಇದೊಂಥರಾ ಹೊಸದು
ಈ ಸಜೆಯು ಸೋಜಿಗವು
ಅರೆರೆ ಇದು ಮಜವು
ಬಿಡುವು ನಿನಗಿದ್ದರೆ ಓ ಗೆಳೆಯ
ಕನಸಿನಲಿ ಒಮ್ಮೆ ಸಂಧಿಸೆಯಾ
ಕಾಯುವೆನು ನಿನಗಾಗಿ
ಇದೋ ಮನವಿ ನನದು
ಈಗೀಗ ಕೇಳುತಿದೆ ಕನ್ನಡಿಯು ನನ್ನಾ
ನೀ ಬದಲಾದೆ ಎಂದು
ಈ ಹರೆಯದ ಹೆಣ್ಣಾ

ಅರಿತೋ ಮರೆತೋ ಮೊಳೆತ ಒಲವು
ಕನಸುಗಳಿಗೆ ರುಜುವಾತು
ಮನಗಳೆರಡು ಬೆರೆತಿರಲು ಕಣ್ಣಿನಲೆ ಮಾತು
ಸದ್ದಿಲ್ಲದೇನೆ ಶುರುವಾದ ಪ್ರೀತೀಲಿ ಎಂಥಾ ಉನ್ಮಾದ
ಕಿರುಬೆರಳ ನೀ ತಾಕಿಸಿ ನಡೆಯಲು
ಕಂಪಿಸಲು ನನ್ನುಸಿರ ಅಲೆಗಳು
ಬಿಗಿದಪ್ಪಿ ನೀ ನಿಂತಿರಲು
ನನ್ನಧರಗಳ ನೀ ಚುಂಬಿಸಲು
ನಾ ನಿನ್ನವಳು
ಎಂದಿಗೂ ನೀ ನನಗೆ ಮೀಸಲಿರು ಗೆಳೆಯ
ಯಾರಿಗೂ ನೀಡದಿರು ನಿನ್ನಯ ಹೃದಯ

Поcмотреть все песни артиста

Other albums by the artist

Similar artists