Kishore Kumar Hits

Raj-Koti - Muddina Hudugi Chanda lyrics

Artist: Raj-Koti

album: Rayaru Bandaru Maavana Manege


ಮುದ್ದಿನ ಹುಡುಗಿ ಚಂದ
ಮೌನದ ರೂಪವೇ ಅಂದ
ಚಂದಕೇ ಚಂದವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ
ಮೌನದ ರೂಪವೇ ಅಂದ
ಚಂದಕೇ ಚಂದವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗಿ ಚಂದ
ಮೌನದ ರೂಪವೇ ಅಂದ
ಚಂದಕೇ ಚಂದವಂತೆ ನಿನ್ನ ಅಂದವು

ಓ ಚಿನ್ನ, ಅಂದು ನೋಡಿದೆ ನಿನ್ನನು
ಓ ರನ್ನ, ಸೆರೆ ಮಾಡಿದೆ ನನ್ನನು
ಅರಿಯನು ಹೇಗೋ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನ್ನೇ ಕಂಡೆ ಎಲ್ಲೆಲ್ಲು, ನನ್ನನ್ನೇ ಕಂಡೆ ನಿನ್ನಲ್ಲು
ನಿನ್ನನ್ನೇ ಕಂಡೆ ಎಲ್ಲೆಲ್ಲು, ನನ್ನನ್ನೇ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಮುದ್ದಿನ ಹುಡುಗಿ ಚಂದ
ಮೌನದ ರೂಪವೇ ಅಂದ
ಚಂದಕೇ ಚಂದವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ
ಬೆರೆಸಿತು ಅದು ನಮ್ಮನು ಆ ದಿನ
ತಾಳದು ಜೀವ ನೀ ನಿಮಿಷ ನೊಂದರು
ಒಂದೆ ಒಂದು ಹನಿಯ ಕಣ್ಣೀರು ಬಂದರು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗ ಚಂದ
ಮೌನದ ರೂಪವೇ ಅಂದ
ಚಂದಕೇ ಚಂದವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚಂದ
ಮೌನದ ರೂಪವೇ ಅಂದ
ಚಂದಕೇ ಚಂದವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

Поcмотреть все песни артиста

Other albums by the artist

Similar artists