Kishore Kumar Hits

Manikanth Kadri - Ninna Danigaagi lyrics

Artist: Manikanth Kadri

album: Savari 2

मेहरबाँ
मेहरबाँ

ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ
ತೀರ ಬಳಿಬಂದ ನೀನು ನನಗೊಂದು ಸೋಜಿಗದಂತೆ ಕಾಣುವೆ
ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದು
ನಾನು ಅನುರಾಗಿ, ನೀನೇ ನನಗಾಗಿ ಎನ್ನುವ ಭಾವನೆ ನನ್ನದು
ಕಣ್ಣಿನಲ್ಲೇನೇ ಹೊಮ್ಮಿದೆ ಕೋಮಲ ಕೋರಿಕೆ
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ
ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ
ತೀರ ಬಳಿಬಂದ ನೀನು ನನಗೊಂದು ಸೋಜಿಗದಂತೆ ಕಾಣುವೆ

(सैयाँ,
सैयाँ
सैयाँ
सैयाँ
सैयाँ
सैयाँ
सैयाँ
सैयाँ)
ಹೆದರುತ ಅರಳಿವೆ ನಾನಾ ಹಂಬಲ ನಿನ್ನನೇ ತಲುಪಲು
ಮನಸಲಿ ಸವಿಗನಸಿನ ಸಾಲೇ ನಿಂತಿದೆ ಅಂಗಡಿ ತೆರೆಯಲು
ಎಲ್ಲೇ ನಾ ಹೋದರೂ ಗಮನ ಇಲ್ಲೇ ಇದೆ
ಸನಿಹವೇ ನೀ ಬೇಕೆನ್ನುವ ಹಠವು ಹೆಚ್ಚಾಗಿದೆ
ಈಗ ಚಂದ್ರನ ಒಪ್ಪಿಗೆ ಬೇಕೆನು ಸಲ್ಲಾಪಕೆ?

ನೆನಪಿನ ಬೀದಿಯ ಎಲ್ಲ ಗೋಡೆಗೂ ನಿನ್ನದೇ ಮೊಗವಿದೆ
ಸಲಿಗೆಯ ತಕರಾರಿನ ಸಣ್ಣ ಕೋಪಕೂ ಬೇರೆಯೇ ಸುಖವಿದೆ
ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲಿ ಹಸ್ತಾಕ್ಷರ
ಬೇಗ ಮೂಡಲಿ ಮತ್ಸರ ಈ ಭೂಮಿ, ಆಕಾಶಕೆ
ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ
ತೀರ ಬಳಿಬಂದ ನೀನು ನನಗೊಂದು ಸೋಜಿಗದಂತೆ ಕಾಣುವೆ

मेहरबाँ

Поcмотреть все песни артиста

Other albums by the artist

Similar artists