ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು ಕತ್ತಲೆ ಕೋಣೆಯ ಒಳಗೆ ಬರಿ ನೆರಳು ಬೆಳಕಿನ ಆಟ ಚಪ್ಪಾಳೆ ಬಿದ್ದರೆ ಗೆಲುವು ಇಲ್ದಿದ್ರೆ ಬಗಣಿ ಗೂಟ ಜಗ ನಗಿಸುವೆವು ತುಸು ಅಳಿಸುವೆವು ಬೇರೆ ಕೆಲಸ ನಮಗಿಲ್ಲ ಇದು ಪರಮಸುಖ, ಬರಿ ಜಿಂಗಿಚಕ ನಮಗಿನ್ನೇನು ಬರೋದಿಲ್ಲ ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು ♪ ಶುರುವಾಗದ cinemaಗೆ ಕಥೆಯೊಂದ ಬರೆದಿಡುವೆವು ದಿನ ರಾತ್ರಿ ಶುರುವಾತಲೇ ನಿಂತಿದೆ shooting-u ಇದು ಕನಸಿನ ಶವಯಾತ್ರೆ Picture ಕಥೆಗಿಂತ ಯಡವಟ್ಟು ನಮ್ಮ ಕಥೆ ಇರುವುದಿಲ್ಲ ನೆರಳು ಕೆಲವೊಮ್ಮೆ ನಮ್ಮ ಜೊತೆ ಈ ಬಣ್ಣಗಳ ಬರಿ ಸಂತೆಯಲಿ ನಮಗೇನೇ ನಾವು ಸಿಗುತಿಲ್ಲ ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು ♪ Make-upಅಲಿ ಕಾಣುವ ನಮ್ಮ ಮುಖ ನಿಮ್ಮಾಣೆಗೂ ನಮದಲ್ಲ ನಾವ್ಯಾರಿರಬಹುದು ಸರಿಯಾಗಿ ನಮಗೂನು ನೆನಪಿಲ್ಲ ಪ್ರೇಕ್ಷಕರ ಶಿಳ್ಳೆ ಅಭಿಮಾನವೇ ನಮಗಾಸ್ತಿ ಚೂರೇ ಚೂರು ಇರಲಿ ನಮ್ಮೇಲೆ ನಿಮ್ ಪ್ರೀತಿ ನಾವ್ ಸೇವಕರು, ನೀವು ಮಾಲೀಕರು ನೀವಿಲ್ಲದೆ cinema ಉಳಿಯಲ್ಲ ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು