ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ ಕನ್ನಡಕ್ಕೆ ಇವನು ಸಾಯೋದಕ್ಕು ಸಿದ್ದ ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು ♪ ಬರೆಯೋರ ತವರೂರು ನಡೆಯೋರ ಹಿರಿಯೂರು ನಟಿಸೋರ ನವಿಲೂರು ನುಡಿಸೋರ ಮೈಸೂರು ಕೂಡಿದರೇ ಕಾಣುವುದು ಎದೆ ತುಂಬಾ ಹಾಡಾಗುವುದು ಮಧುರ ಮಧುರ ಇದು ಅಮರ ಅಮರ ಇದು ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ♪ ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ ಹಾಡಿದರೇ ತಿಳಿಯುವುದು ಮೈ ತುಂಬಾ ಓಡಾಡುವುದು ಸರಳ ಸರಳ ಇದು ವಿರಳ ವಿರಳ ಇದು ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ♪ ಅಭಿಮಾನ ಹಾಲಂತೆ (ಹಾಲಂತೆ) ರವಿಮಾನ ವಿಷವಂತೆ ಸಹಿಸೋರು ನಾವಂತೆ (ನಾವಂತೆ) ನಿರಭಿಮಾನ ಬೇಡಂತೆ ಕನ್ನಡತಿ ಆಜ್ಞೆಇದು ಅವಳೆದೆಯಾ ಹಾಡು ಇದು ಅವಳ ಬಯಕೆ ಇದು ನಮಗೆ ಹರಕೆ ಇದು ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು ಸಿದ್ದವೋ ಸತ್ತವೋ ಕನ್ನಡಕ್ಕೆ ಬಾಳಲು