Kishore Kumar Hits

Hamsalekha - Hasidaga Anna (From “Thavarina Siri”) lyrics

Artist: Hamsalekha

album: Golden Hits Hamsalekha


ಹಸಿದಾಗ ಅನ್ನ ದಣಿದಾಗ ನೀರು
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಮನಸಿದ್ದು ಪ್ರೀತಿ ಕೈ ಇದ್ದು ದಾನ
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ
ಹಂಚಿಕೊಂಡು ತಿನ್ನದೇ ಇದ್ರೆ
ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ
ಹಂಚಿಕೊಂಡು ತಿನ್ನದೇ ಇದ್ರೆ
ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಮೋಡ ಮುನಿದು ಚದುರಿದರೆ ಪೈರು ತೆನೆ ಇಲ್ಲಣ್ಣ
ಹೂವು ಮುನಿದು ಮುಚ್ಚಿದರೆ ಜೇನು ಗೂಡೇ ಇಲ್ಲಣ್ಣ
ತನ್ನೆಲ್ಲ ಕೆಚ್ಚಲು ಕರುವಿಗೆ ಅಂದರೆ
ಹಸುವಿನ ಹಾಲೇ ನಮಗಿಲ್ಲ ಹಸುವಿನ ಹಾಲೇ ನಮಗಿಲ್ಲ
ನೀಡೋ ಈ ನಿಯಮ ಪಾಲಿಸದಿದ್ದರೆ ಏನ್ ಚಂದವೋ
ಏನ್ ಚಂದವೋ
ಶಿವನು ಕೊಟ್ಟ ಆಸ್ತಿ ಭೂಮಿಯಾ ಸಿರಿ
ಅವನಾಸ್ತಿ ನನದೆನ್ನೋದು ಏನ್ ಚಂದವೋ
ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ದೇವರಿಗೆ ಕಾಯಾಗಿ ಗಂಟಲಿಗೆ ನೀರಾಗಿ
ಗುಡಿಸಲಿಗೆ ಸೂರಾಗಿ ಸೇತುವೆಗೆ ಹಾಸಾಗಿ
ಬದುಕೆಲ್ಲಾ ನೀಡುತ್ತಾ ಬಾನೆತ್ತರ ಬಾಳುತ್ತಾ
ಇರಬೇಕು ತೆಂಗಿನ ಮರದಂತೆ ಇರಬೇಕು ತೆಂಗಿನ ಮರದಂತೆ
ನರನಾಗಿ ಮರೆತು ಕೀಳಾಗಿ ಹೋದರೆ
ಏನ್ ಚಂದವೋ ಏನ್ ಚಂದವೋ
ಮನಸಿದ್ದು ಪ್ರೀತಿ ಕೈ ಇದ್ದು ದಾನ
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ನಮ್ಮ ಅಣ್ಣನೇ ನಮ್ಮ ತವರಿನ ಸಿರಿ
ಈ ದೈವ ಇಲ್ಲದ ಊರು ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು
ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

Поcмотреть все песни артиста

Other albums by the artist

Similar artists