ದೂರ ದೂರಾ ನೀ ಯಾಕೆ ನಿಂತೆ ನೀ ಮೌನದಲ್ಲೇ ನೀ ಮಾತನಾಡೆ ನೀ ದಾರಿ ಮಧ್ಯೆ ನೀ ಕತ್ತಲಾದಾಗ ಬೇರೆ ಏನಿಲ್ಲ ದೀಪವಾಗು ನೀ ಉತ್ತರವನ್ನು ನೀಡುತ್ತ ಕಣ್ಣಲಿ ಉತ್ಸಹವನ್ನು ತುಂಬು ನೀ ನನ್ನಲಿ ಸಾಂತ್ವಾನ ನೀಡಿದ ಈ ಹುಚ್ಚು ಸಂತೆಲಿ ಈ ನಿನ್ನ ಪ್ರೀತಿ ಒಂದೇ ನನ್ನ ಸಂಜೀವಿನಿ ದೂರ ದೂರಾ ನೀ ಯಾಕೆ ನಿಂತೆ ನೀ ಮೌನದಲ್ಲೇ ನೀ ಮಾತನಾಡೆ ನೀ ಕಾಡುತ್ತಿದೆ ಸಮಯ ಸಾಧಿಸಿ ಜಗ ಹೀಗೇಕೆ ಮುಖವಾಡ ಧರಿಸಿ ಈ ನೋವಿಗೆ ಕೊನೆಯೆ ಇಲ್ಲವೆ ದಿನಕ್ಕೊಂದೊಂದು ಅವಮಾನ ಸಹಿಸಿ ಬದಲಾದೀತೆ ಎಲ್ಲಾ ಎಂದಾದರು ಸದಾ ನೋಡುವಂತ ಆಕಾಶ ಭೂಮಿ ಸಾಕ್ಷಿಯನ್ನು ನೀಡ ಬನ್ನಿ ನೀವಾದರು ದೂರ ದೂರಾ ನೀ ಯಾಕೆ ನಿಂತೆ ನೀ ಮೌನದಲ್ಲೇ ನೀ ಮಾತನಾಡೆ ನೀ ಈ ತಂಗಾಳಿಯು ಬಿಡದೇ ಬೀಸಲಿ ಹೊಸದಾದಂತ ಪುಟವನು ತೆರೆದು ಈ ಬಾಳಿನ ಗ್ರಹಣ ನೀಗಲಿ ಎದುರಾದಂತ ನೆರಳಲಿ ಸರಿದು ಬೆಳಕಾದೀತೆ ಎಲ್ಲಾ ಹೇಗಾದರು ಸಮಾಧಾನದಿಂದ ವಿಶ್ವಾಸದಿಂದ ದೈರ್ಯವನ್ನು ಹೇಳಬನ್ನಿ ಯಾರಾದರು ದೂರ ದೂರಾ ನೀ ಯಾಕೆ ನಿಂತೆ ನೀ ಮೌನದಲ್ಲೇ ನೀ ಮಾತನಾಡೆ ನೀ