ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
ಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು
ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
♪
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಬಿಡದೆ ಢಣಾ ಢಣಾರ್ ಎಂದು ಬಡಿದು ಚಪ್ಪಾಳಿಕ್ಕುತಾ
ಬಿಡದೆ ಢಣಾ ಢಣಾರ್ ಎಂದು ಬಡಿದು ಚಪ್ಪಾಳಿಕ್ಕುತಾ
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
♪
ಹರಿಯು ಮುಡಿದ ಹೂವ ಹರಿವಾಣದಲ್ಲಿ ಹೊತ್ತುಕೊಂಡು
ಹರುಷದಿಂದ ಆಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
♪
ಇಂತು ಸಕಲ ಲೋಕಕ್ಕೆ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಇಂತು ಸಕಲ ಲೋಕಕ್ಕೆ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದು
ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದು
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
ಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
Поcмотреть все песни артиста
Other albums by the artist