Vishnuvardhan - Baanalli Ninninda lyrics
Artist:
Vishnuvardhan
album: Neenu Nakkare Haalu Sakkare
ಶರಣು
ಶರಣೆನುವೆ
ಶರಣೆನುವೆ
ಓ, ಪ್ರಭುವೇ ಶರಣೆನುವೆ
ಬಾನಲ್ಲಿ ನಿನ್ನಿಂದ ಸೂರ್ಯೋದಯ
♪
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು ನೀರು ಭುವಿ ಸೇರಲು
ಭೂಮಿ ಹಸಿರಾಗಲು ಲೋಕ ಗೆಲುವಾಗಲು
(ಓಂ
ಓಂ
ಓಂ ಓಂ ಓಂ ಓಂ)
ನೀ ಕಾರಣನು ದೇವ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
♪
ಈ ಲತೆ ನೀನೇ
ಈ ಲತೆ ನೀನೇ
ಈ ಸುಮ ನೀನೇ
ಈ ಸುಮತಂದ ಗಂಧವೂ ನೀನೇ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ
ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ
ಬಾನಾಡಿ ಕೊರಳಲ್ಲಿ ಇಂಪಾಗಿಯೂ
ತಂಗಾಳಿ ಸುಳಿದಾಗ ತಂಪಾಗಿಯೂ
ತಂಗಾಳಿ ಸುಳಿದಾಗ ತಂಪಾಗಿಯೂ
ಹಣ್ಣ ರುಚಿಯಲ್ಲಿಯೂ ಜೇನ ಸಿಹಿಯಲ್ಲಿಯೂ
ಹಾಲ ಬೆಳಕಲ್ಲಿಯೂ ರಾತ್ರಿ ಇರುಳಲ್ಲಿಯೂ
(ಓಂ
ಓಂ
ಓಂ ಓಂ ಓಂ ಓಂ)
ನೀನೇ ಇರುವೆ ದೇವ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
♪
ಈಶ್ವರ ನೀನೇ
ಈಶ್ವರ ನೀನೇ ಶಾಶ್ವತ ನೀನೇ
ಎಲ್ಲವೂ ನೀನೇ ಎಲ್ಲೆಡೆ ನೀನೇ
ಸಂತೋಷ ಕೊಡುವಂಥ ನಗೆಯಲ್ಲಿಯೂ
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ
ಹಿತವಾದ ಸಂಗೀತ ಸ್ವರದಲ್ಲಯೂ
ಕವಿಯಾಡೋ ಸವಿಯಾದ ಮಾತಲ್ಲಿಯೂ
ಕವಿಯಾಡೋ ಸವಿಯಾದ ಮಾತಲ್ಲಿಯೂ
ಬೆಂಕಿ ಕಿಡಿಯಲ್ಲಿಯೂ, ನೀರ ಹನಿಯಲ್ಲಿಯೂ
ಕಡಲ ಒಡಲಲ್ಲಿಯೂ, ಸಿಡಿವ ಸಿಡಿಲಲ್ಲಿಯೂ
(ಓಂ
ಓಂ
ಓಂ ಓಂ ಓಂ ಓಂ)
ನೀನೇ ಇರುವೆ ದೇವ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
Поcмотреть все песни артиста
Other albums by the artist