ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ ಬಾನಲ್ಲಿ ಚಂದ್ರ ಚಂದ ನದಿಗಿಂತ ನೀನು ಅಂದ ಕವಿ ಬರೆದ ಕಾವ್ಯ ಅಂದ ನನಗೆಂದೂ ನೀನೇ ಅಂದ ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ ♪ ಹೇಳೋಕ್ಕಾಗದ ರೀತಿ ತಿಳಿಸೋಕ್ಕಾಗದ ಪ್ರೀತಿ ಕಲಿತೆ ನಿನ್ನಿಂದ ನಾನು ಈ ದಿನ ಮುಳುಗೂ ಸೂರ್ಯನ ನೋಡಿ ಮನವಿ ಮಾಡಿದೆ ಕಾಡಿ ತಡವಾಗಿ ಹೋಗು ಎಂದು ನೀನು ಪ್ರತಿದಿನ ಮನಸೆಲ್ಲೋ ಕರೆದರೂ ನಾ ನಿನ್ನ ಕೈ ಸೆರೆ ಕೊನೆವರೆಗೂ ಆಸರೆ ಈ ಜೀವ ಇದ್ದರೆ ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನದೇ ♪ ಮಲ್ಲಿಗೆ ಮಂಟಪದಲ್ಲಿ ನಿನ್ನ ಕೊರಳಿಗೆ ಮಾಲೆ ಹಾಕಿ ಕಣ್ಣೀರನ್ನು ಒರೆಸುವೆನು ನಿನ್ನವನಾದರೆ ನಮ್ಮಿಬ್ಬರ ಪ್ರೀತಿಯ ನೋಡಿ ಬಾನಲ್ಲಿರೋ ಚಂದಿರ ಹಾಡಿ ಬೆಳದಿಂಗಳ ಕಳುಹಿಸಿದ ನಮ್ಮನು ಕಾಯಲು ಮುಳ್ಳಾಗಿ ಕಾಯುವೆ ನನ್ನಾಸೆ ರೋಜಾ ನೀ ನನ್ನೆದೆಯ ಒಲವಿಗೆ ಚಿತ್ತಾರ ಚೆಲುವೆ ನೀ ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ ಬಾನಲ್ಲಿ ಚಂದ್ರ ಚಂದ ನದಿಗಿಂತ ನೀನು ಅಂದ ಕವಿ ಬರೆದ ಕಾವ್ಯ ಅಂದ ನನಗೆಂದೂ ನೀನೇ ಚಂದ ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ