Kishore Kumar Hits

Khushboo - Yaavudo Ee Bombe lyrics

Artist: Khushboo

album: Yuga Purusha


ನಿಸಗರಿಸ
ಈ ತಾಳ ಇದ್ದರೆ
ಹಾಡು ಬಾರದೇ
ಈ ಹಾಡು ಇದ್ದರೆ
ನಿದ್ದೆ ಬಾರದೇ
ಈ ನಿದ್ದೆ ಬಂದರೆ
ಕನಸು ಬಾರದೇ
ಆ ಕನಸಿನಲ್ಲಿ ಈ ಬೊಂಬೆ ಕಾಣದೇ
ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೋ
ಮೇನಕೆಯ ಚೆಲುವೋ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೋ
ಶಾಂತಲೆಯ ಕಲೆಯೋ
ಕಾಳಿದಾಸನ, ಪ್ರೇಮಗೀತೆಯೋ
ಕಾಳಿದಾಸನ, ಪ್ರೇಮಗೀತೆಯೋ
ನೂರಾರು ಹೂಗಳಿದ್ದರು ಈ ಅಂದ ಬೇರೆ
ಆ ತಾರೆ ಮಿನುಗುತಿದ್ದರು ಈ ಕಣ್ಣೆ ಬೇರೆ, ನೀನ್ಯಾರೆ
ನೀನಿಲ್ಲಿ ಸುಮ್ಮನಿದ್ದರು ಒಳಮಾತೆ ಬೇರೆ
ಹಾಡಲ್ಲೆ ನೀನು ಇದ್ದರು, ಎದುರಿರುವ ತಾರೆ
Hello, ನೀನ್ಯಾರೆ?
ನನ್ನ ಮನದ ಪ್ರೇಮ ರಾಗಕೆ
ನಿನ್ನ ಎದೆಯ ತಾಳ ಇದ್ದರೆ
ನಾನು ಹಾಡೋ ನೂರು ಭಾವಕೆ
ನೀನು ಒಮ್ಮೆ ನೋಡಿ ನಕ್ಕರೆ
ಸಾಕು
ಯಾವುದೋ ಈ ಬೊಂಬೆ ಯಾವುದೋ
ಯಾವುದೋ ಈ ಬೊಂಬೆ ಯಾವುದೋ
ನೀನ್ಯಾರೋ ತಿಳಿಯದಿದ್ದರೂ ನನಗೆ ನೀ ರಾಧೆ
ಕಲ್ಲಾಗಿ ನಾನು ನಿಂತರು ಕರಗಿ ನೀರಾದೆ
ಏಕಾದೆ?
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನು ಹೇಳದಿದ್ದರೂ ನನಗೆ ಜೊತೆಯಾದೆ
ಹೇಗಾದೆ?
ಇಂದು ನೆನ್ನೆ ನಾಳೆ ಯಾವುದು
ನನಗೆ ಈಗ ನೆನಪು ಬಾರದು
ನಿನ್ನ ಬಿಟ್ಟು ನನ್ನ ಮನಸಿದು
ಬೇರೆ ಏನು ಕೇಳಲಾರದು
ರಾಧೆ
ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೋ
ಮೇನಕೆಯ ಚೆಲುವೋ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೋ
ಶಾಂತಲೆಯ ಕಲೆಯೋ
ಕಾಳಿದಾಸನ, ಪ್ರೇಮಗೀತೆಯೋ
ಕಾಳಿದಾಸನ, ಪ್ರೇಮಗೀತೆಯೋ

Поcмотреть все песни артиста

Other albums by the artist

Similar artists